ಪ್ರೀತಿ ತುಂಬಿದ ದಾಂಪತ್ಯ,
ಮುದ್ದಾದ ಮಕ್ಕಳು,
ತೊಂದರೆ ಕೊಡದ ನೆಂಟರು,
ಕೈ ತುಂಬ ಸಂಬಳದ ಕೆಲಸ
….ಒಟ್ಟಲ್ಲಿ ಸುಖದ ಜೀವನ…..ಆದರೂ ಏನೋ ಇಲ್ಲ
, ಏನೋ ಮಾಡಿಲ್ಲ, ಯಾವುದೊ ಸರಿ ಇಲ್ಲ
ಎಂಬ ಭಾವ ಮನದ ಮೂಲೆಯಲ್ಲಿ
ಕೂತು ದಿನೇ ದಿನೇ ಕೊರುಯುತ್ತಿದೆ….ಏನಿದು….ನಲವತ್ತಾಯಿತಲ್ಲ
ಎಂಬ ಭಯವೇ
…ನಲವತ್ತಾದರೂ ಏನೂ ಮಾಡಿಲ್ಲ ಎಂಬ
ಬೇಜಾರೆ?
ಯಾರು ಏನೇ ಮಾತನಾಡಿದರು ಮನಸ್ಸು
ಅಲ್ಲಿಗೆ ತಿರುಗಿ ಬರುತ್ತಿದೆ, ನಾನೇನು
ಆಗಬೇಕೆನ್ದಿದ್ದೇನೋ ಅದು ಆಗಿದ್ದೆನೆಯೇ?
ನನ್ನ ಕನಸು ಏನಿತ್ತು? ಯಾಕೆ
ವಿರುಧ್ಧ ದಿಕ್ಕಿನಲ್ಲಿ ನನ್ನ ಪಯಣ? ಇದು
ಹೊಸದಲ್ಲ ಕಾಲೇಜ್ ಜೀವನ ಪ್ರಾರಂಭಿಸಿದಾಗ,
ವೃತ್ತಿ ಜೀವನ ಶುರು ಮಾಡಿದಾಗ….ಯೋಚಿಸಿದ್ದೆ
ಆದರೂ ಈಗ ಅದರ ಪರಿಯೇ ಬೇರೆ…ಇದಕ್ಕೊಂದು
ದಾರಿ ಹುಡುಕಲೇ ಬೇಕೆಂಬ ಹಂಬಲ…
ಮಕ್ಕಳಿಗೆ
ಪಾಠ ಹೇಳುವಾಗ…ಮಕ್ಕಳ ಭವಿಷ್ಯ ಯೋಚಿಸುವಾಗ…ನನ್ನೊಳಗೆ
ನಾನೆ ಕೇಳಿಕೊಳ್ಳುವ ಪ್ರಶ್ನೆ…ನಾನೇನು ಸಾಧಿಸಬೇಕು ಅಂದುಕೊಂಡಿದ್ದೆ…ಏನು ಮಾಡಿದೆ…ತಲೆ ಮಾತ್ರವಲ್ಲದೆ ನಿದ್ರೆಯೂ
ಕೆಡಿಸುವ ಯೋಚನೆ….ಮುಂದೇನು?
ಎಲ್ಲ ಸರಿ ಇದೆ ಆದರೂ
ಇನ್ನೇನೋ ಬೇಕಿದೆ….ನಾನು ಏನು ಮಾಡಬಹುದು
ಎಂಬುವುದು ನನಗಲ್ಲದೆ ಬೇರೆ ಯಾರಿಗೆ ಗೊತ್ತಿರಬಹುದು,
ಆದರೂ ನಮ್ಮ ಯೋಚನೆ ದಿಕ್ಕನ್ನು
ಸರಿಯಾದ ದಿಶೆಗೆ ತಿರುಗಿಸಲು ಓರ್ವ
ಮಾರ್ಗದರ್ಶಕ…ಗುರುವಿನ
ಅಗತ್ಯ ಇದೆ ಎನಿಸುತ್ತದೆ, ನಮ್ಮ
ಕಸಿವಿಸಿ ಗೊಂದಲಗಳನ್ನು ಅರಿತು ನಮ್ಮಲ್ಲಿರುವ ಪ್ರತಿಭೆ
ಮತ್ತು ಕೌಶಲ್ಯಗಳನ್ನು ನಾವೇ ಅರಿತು ಮುಂದುವರಿಯಲು
ಮಾರ್ಗದರ್ಶನ ನೀಡುವವರನ್ನು ಹುಡುಕಿಕೊಳ್ಳ ಬೇಕು…ಗುರಿ ಸಾಧಿಸುವ…ಮಾಡುವ ಕೆಲಸದಲ್ಲಿ ಹುರುಪು
ಉತ್ಸಾಹ ತುಂಬಿಕೊಳ್ಳುವ ಕಾರ್ಯಗಳನ್ನು ಶುರು ಮಾಡಿ…ಮುಂದುವರಿಸಿಕೊಂಡು ಹೋದಲ್ಲಿ…ನಲವತ್ತರ ತುಮುಲದಿಂದ …ನಲವತ್ತರ
ಜ್ಞಾನೋದಯ ಆಗುವುದೇ?